ಜೆನ್ನಿಫರ್‌ ವಿಂಗೆಟ್‌ (ಜನನ ೩೦ ಮೇ ೧೯೮೫) ರವರು ಭಾರತೀಯ ದೂರದರ್ಶನ ನಟಿ. ಇವರು ಸರಸ್ವತಿಚಂದ್ರ ಧಾರವಾಹಿಯಲ್ಲಿ ಕುಮುದ್ ದೇಸಾಯಿ, ಬೇಹದ್ ನಲ್ಲಿ ಮಾಯ ಮೆಹ್ರೋತ್ರ ಮತ್ತು ಬೇಪನ್ಹಾ ಧಾರವಾಹಿಯಲ್ಲಿ ಝೋಯ ಸಿದ್ದಿಕಿ ಪಾತ್ರವನ್ನು ನಿರ್ವಹಿಸಿದ್ದಾರೆ. = ವೃತ್ತಿಜೀವನ = ಜೆನ್ನಿಫರ್ ತನ್ನ ೧೨ನೇ ವಯಸ್ಸಿನಲ್ಲಿ 'ರಾಜ ಕೊ ರಾಣಿ ಸೆ ಪ್ಯಾರ್ ಹೊ ಗಯ' ಎಂಬ ಚಲನಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ನಂತರ ತನ್ನ ೧೪ನೇ ವಯಸ್ಸಿನಲ್ಲಿ 'ಕುಚ್ ನಾ ಕಹೊ' ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ತದನಂತರ ಅವರು ಹಲವಾರು ಟಿವಿ ಶೋ ಗಳಲ್ಲಿ ಕೆಲಸವನ್ನು ಮಾಡಿದ್ದಾರೆ. ದೂರದರ್ಶನದಲ್ಲಿ ನಾಯಕಿನಯಾಗಿ ಇವರಿಗೆ ಕಾರ್ತಿಕಾ ಎಂಬ ಕಾರ್ಯಕ್ರಮವು ದೊಡ್ಡ ವಿರಾಮ ತಂದಿತು. ಅಲ್ಲಿ ಇವರು ಹೆಣಗಾಡುತ್ತಿರುವ ಗಾಯಕಿಯ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಕಸೌಟಿ ಜಿಂದಗೀ ಕೇ ಧಾರವಾಹಿಯಲ್ಲಿ ನಟಿಸಿದರು. ಅದರಲ್ಲಿ ಇವರು ಮುಖ್ಯಪಾತ್ರದಲ್ಲಿ ಸ್ನೇಹ ಎಂಬ ಪಾತ್ರವನ್ನು ನಿರ್ವಹಿಸಿದರು. ೨೦೦೯ ರಲ್ಲಿ , ದಿಲ್ ಮಿಲ್ ಗಯೆ ಧಾರವಾಹಿಯಲ್ಲಿ ರಿಧಿಮಾ ಗುಪ್ತಾ ಎಂಬ ಪಾತ್ರವನ್ನು ನಿರ್ವಹಿಸಿದರು . ೨೦೧೩ ರಲ್ಲಿ ಇವರು ಸಂಜಯ್ ಲೀಲಾ ಭನ್ಸಾಲಿ ಅವರ ದೂರದರ್ಶನ ಕಾರ್ಯಕ್ರಮ ಸರಸ್ವತಿಚಂದ್ರ ದಲ್ಲಿ ಗೌತಮ್ ರೋಡ್ ಎದುರು ಕುಮುದ್ ದೇಸಾಯಿ ಪಾತ್ರದಲ್ಲಿ ನಟಿಸಿದರು. ಅವರ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ವಿಮರ್ಶಕರಿಗಾಗಿ ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ೨೦೧೬ ರಲ್ಲಿ, ವಿಂಗೆಟ್ ಸೋನಿ ಟಿವಿಯ ಬೇಹದ್‌ ನಲ್ಲಿ ಮಾಯಾ ಮೆಲ್ಹೋತ್ರಾ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಅಭಿನಯಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಮತ್ತು ಮೆಚ್ಚುಗೆಯನ್ನು ಗೆದ್ದರು. ೨೦೧೮ ರಲ್ಲಿ, ಅವರು ಹರ್ಷದ್ ಚೋಪ್ಡಾ ರವರ ಜೊತೆ ಕಲರ್ಸ್ ಟಿವಿಯ ಬೆಪನ್ಹಾ ಎಂಬ ಧಾರವಾಹಿಯಲ್ಲಿ ಜೋಯಾ ಸಿದ್ದಿಕಿ ಪಾತ್ರವನ್ನು ನಿರ್ವಹಿಸಿದರು. ವಿಂಗೆಟ್ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಟೆಲಿವಿಷನ್ ನಟಿಯರಲ್ಲಿ ಒಬ್ಬರು. ಇದೀಗ ಇವರು ಬೇಹದ್ ಧಾರವಾಹಿಯ ಎರಡನೇ ಸರಣಿಯಲಲ್ಇ ಮಾಯಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. = ಫಿಲ್ಮೋಗ್ರಾಫಿ = == ಚಲನಚಿತ್ರಗಳು == == ದೂರದರ್ಶನ == == ಅತಿಥಿ ಪ್ರದರ್ಶನ == = ಪ್ರಶಸ್ತಿಗಳು = = ಉಲ್ಲೇಖಗಳು =